Thursday 30 September 2021

 

ಸಿಂಧನೂರು ತಾಲೂಕಿನಿಂದ ರಾಜ್ಯ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳಿಗೆ ಅಭಿನಂದನೆಗಳು.

Friday 24 September 2021

ಶಿಕ್ಷಕ ದಿನಾಚರಣೆಗೆ ಎಲ್ಲರಿಗೂ ಆದರದ ಸುಸ್ವಾಗತ

 ಶಿಕ್ಷಕ ದಿನಾಚರಣೆಗೆ ಎಲ್ಲರಿಗೂ ಆದರದ ಸುಸ್ವಾಗತ



ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಡಿಯಲ್ಲಿ ಶಿಕ್ಷಕರಿಗೆ ನೀಡಲಾಗುತ್ತಿರುವ ಸೌಲಭ್ಯಗಳು.

 ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಡಿಯಲ್ಲಿ ಶಿಕ್ಷಕರಿಗೆ ನೀಡಲಾಗುತ್ತಿರುವ ಸೌಲಭ್ಯಗಳು.

  

1) ಶಿಕ್ಷಕರಿಗೆ ಹಾಗೂ ಅವರ ಅವಲಂಬಿತರಿಗೆ ವೈದ್ಯಕೀಯ ಧನ ಸಹಾಯ :

ಶಿಕ್ಷಕರಿಗೆ / ನಿವೃತ್ತ ಶಿಕ್ಷಕರಿಗೆ ಹಾಗೂ ಅವರ ಅವಲಂಬಿತರಿಗೆ ಖಾಯಿಲೆಯ ತೀವ್ರತೆಯನ್ನು ಆಧರಿಸಿ ಗರಿಷ್ಠ ರೂ. 50,000/- ಗಳ ಮಿತಿಗೊಳಪಟ್ಟು ವೈದ್ಯಕೀಯ ಧನ ಸಹಾಯವನ್ನು ನೀಡಲಾಗುತ್ತಿದೆ


2) ಸೇವೆಯಲ್ಲಿರುವಾಗ ಹಾಗೂ ನಿವೃತ್ತಿಯ ನಂತರ ಮೃತ ಹೊಂದಿದ ಶಿಕ್ಷಕರ ಕುಟುಂಬಗಳಿಗೆ ಕುಟುಂಬ ನಿರ್ವಹಣೆಗಾಗಿ ಧನ ಸಹಾಯ :

ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರು ಸೇವೆಯಲ್ಲಿರುವಾಗಲೇ / ನಿವೃತ್ತಿಯ ನಂತರ ಮೃತಪಟ್ಟಲ್ಲಿ ಅವರ ವಾರಸುದಾರರಿಗೆ ಕುಟುಂಬ ಪಿಂಚಣಿ ಮಂಜೂರಾತಿಗೆ ಮುನ್ನ ತುರ್ತು ಕುಟುಂಬ ನಿರ್ವಹಣೆಗಾಗಿ ಸೇವೆಯಲ್ಲಿರುವಾಗ ಮೃತಪಟ್ಟಲ್ಲಿ ರೂ. 10,000/-ಗಳ ಧನಸಹಾಯ, ನಿವೃತ್ತಿಯ ನಂತರ ಮೃತಪಟ್ಟಲ್ಲಿ ರೂ.5,000/-ಗಳ ಧನಸಹಾಯವನ್ನು ನೀಡಲಾಗುವುದು.


3) ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನ ಸಹಾಯ:

ಶಿಕ್ಷಕರಿಗೆ ಹಾಗೂ ನಿವೃತ್ತ ಶಿಕ್ಷಕರಿಗೆ ಪಿ.ಯು.ಸಿ ಯಿಂದ ಪದವಿ ತರಗತಿಗಳಲ್ಲಿ (ಡಿಪ್ಲೊಮಾ ಸೇರಿದಂತೆ) ವ್ಯಾಸಂಗ ಮಾಡುತ್ತಿರುವ ಅವರ ಮಕ್ಕಳ ವ್ಯಾಸಂಗಕ್ಕಾಗಿ ಕೋರ್ಸುಗಳನ್ನು ಆಧರಿಸಿ ಕನಿಷ್ಠ ರೂ. 1,000/- ರಿಂದ ಗರಿಷ್ಠ ರೂ. 3,000/-ಗಳ ಧನಸಹಾಯವನ್ನು ನೀಡಲಾಗುತ್ತಿದೆ.


4)ಶಿಕ್ಷಕರ / ನಿವೃತ್ತ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ವಿದ್ಯಾರ್ಥಿ ವೇತನ:

ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದಂತಹ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.


5) ಗುರುಭವನಗಳ ಹಾಗೂ ಅತಿಥಿ ಗೃಹಗಳ ನಿರ್ಮಣಕ್ಕೆ ಅನುದಾನ:

ಶಿಕ್ಷಕರ ಸಭೆ, ಸಮಾರಂಭ ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲು ತಾಲ್ಲೂಕು/ಜಿಲ್ಲಾ ಕೇಂದ್ರಗಳಲ್ಲಿ ನಿರ್ಮಿಸುವ ಗುರುಭವನಕ್ಕೆ ಸಭಾಂಗಣದ ವಿಸ್ತೀರ್ಣವನ್ನಾಧರಿಸಿ ಕನಿಷ್ಠ ರೂ.12 ಲಕ್ಷದಿಂದ ಗರಿಷ್ಠ 30 ಲಕ್ಷ ರೂಗಳ ವರೆವಿಗೂ ಅನುದಾನವನ್ನು ಹಾಗೂ ಅತಿಥಿಗೃಹಗಳ ನಿರ್ಮಾಣಕ್ಕೆ (ತಲಾ ಕೊಠಡಿಗೆ ರೂ.1,10,000/-ರಂತೆ) ಗರಿಷ್ಠ 11 ಲಕ್ಷ ರೂಗಳ ಅನುದಾನವನ್ನು ನೀಡಲಾಗುತ್ತದೆ.


6) ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ ಶಿಕ್ಷಕರಿಗೆ ನೀಡುವ ವಿವಿಧ ಪ್ರಶಸ್ತಿಗಳು:

ಶ್ಲಾಘನೀಯ ಸೇವೆ ಸಲ್ಲಿಸಿದ ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕರನ್ನು ಗುರುತಿಸಿ ಜಿಲ್ಲಾ / ರಾಜ್ಯ ಮಟ್ಟದ ವಿಶೇಷ ಶಿಕ್ಷಕ / ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿಗಳನ್ನು ನೀಡಲಾಗುವುದು.


7) ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಪ್ರಶಸ್ತಿ :

ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳ ಆಯೋಜನೆ ಮಾಡಲಾಗುತ್ತದೆ. ರಾಜ್ಯ ಮಟ್ಟದಲ್ಲಿ ಮೊದಲ ಮೂರು ಪ್ರಶಸ್ತಿ ಪಡೆದ ಶಿಕ್ಷಕರಿಗೆ ತಲಾ ರೂ. 5,000/- ರೂ. 3,000/- ಹಾಗೂ ರೂ. 2,000/- ಗಳ ನಗದು ಪ್ರಶಸ್ತಿ ನೀಡಲಾಗುತ್ತದೆ. ರಾಜ್ಯ ಮಟ್ಟದಲ್ಲಿ ಕಲಿಕಾ ವಸ್ತುಗಳ ತಯಾರಿಕೆ ಸ್ಪರ್ಧೆಯಲ್ಲಿ ಭಾಗವಹಿಸಿದ ಶಿಕ್ಷಕರಿಗೆ ತಯಾರಿಕಾ ವೆಚ್ಚವಾಗಿ ರೂ. 500/-ರ ಮೊತ್ತವನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ


8) ಶಿಕ್ಷಕರಿಗೆ ಸುರಕ್ಷಾ ಪರಿಹಾರ ಯೋಜನೆ:

ಅಪಘಾತಗಳಿಂದಾಗಿ ಮೃತ ಹೊಂದಿದ ಸರ್ಕಾರಿ ಹಾಗೂ ಅನುಮೋದಿತ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಥಮಿಕ ಶಾಲಾ ಹಂತದಿಂದ ವಿಶ್ವವಿದ್ಯಾಲಯದ ಹಂತದವರೆಗಿನ ಶಿಕ್ಷಕರುಗಳಿಗೆ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ಸುರಕ್ಷಾ ಪರಿಹಾರ ಯೋಜನೆ” ಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಶಿಕ್ಷಕರ ಕುಟುಂಬದವರಿಗೆ ರೂ. 50,000/- ವರೆಗೆ ಪರಿಹಾರ ಧನ ನೀಡಲಾಗುತ್ತಿದೆ


9) ಲ್ಯಾಪ್ ಟಾಪ್ ಖರೀದಿಗಾಗಿ ಬಡ್ಡಿ ರಹಿತ ಸಾಲ:

ಲ್ಯಾಪ್ ಟಾಪ್ ಖರೀದಿಗಾಗಿ ಪ್ರತಿ ತಾಲ್ಲೂಕಿನ 10 ಶಿಕ್ಷಕರುಗಳಿಗೆ ತಲಾ ರೂ. 30,000/- ಗಳ ಬಡ್ಡಿ ರಹಿತ ಸಾಲ ನೀಡಿ, ಮುಂದಿನ 10 ತಿಂಗಳಲ್ಲಿ ತಿಂಗಳಿಗೆ ರೂ. 3,000/- ದಂತೆ ಸಂಬಳದಲ್ಲಿ ಕಟಾಯಿಸಿ ಬಡ್ಡಿರಹಿತವಾಗಿ ಹಿಂಪಡೆಯಲಾಗುವುದು


ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ, ನವದೆಹಲಿಯಿಂದ ಶಿಕ್ಷಕರಿಗೆ ನೀಡಲಾಗುತ್ತಿರುವ ಸೌಲಭ್ಯಗಳು

1) ಶಿಕ್ಷಕರಿಗೆ ಹಾಗೂ ಅವರ ಅವಲಂಬಿತರಿಗೆ ವೈದ್ಯಕೀಯ ಚಿಕಿತ್ಸೆಗೆ ಧನಸಹಾಯ :

ಶಿಕ್ಷಕರಿಗೆ / ನಿವೃತ್ತ ಶಿಕ್ಷಕರಿಗೆ ಹಾಗೂ ಅವರ ಅವಲಂಬಿತರಿಗೆ ಮಾರಕ ರೋಗಗಳ ಚಿಕಿತ್ಸೆಗಾಗಿ ವೈದ್ಯಕೀಯ ಧನಸಹಾಯವನ್ನು ನೀಡಲಾಗುತ್ತದೆ.


2) ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನಸಹಾಯ :

ರಾಜ್ಯಮಟ್ಟದಲ್ಲಿ ವೈಜ್ಞಾನಿಕ ಹಾಗೂ ವಿನೂತನ ಶೈಕ್ಷಣಿಕ ಪ್ರಯೋಗಗಳನ್ನು ಮಾಡಿದ ಎಂಟು ಜನ (ಪ್ರಾಥಮಿಕ-4 ಮತ್ತು ಪ್ರೌಢ-4) ಶಿಕ್ಷಕರಿಗೆ ತಲಾ ರೂ.12,000/-ಗಳ ನಗದು ಬಹುಮಾನ ಒಳಗೊಂಡಂತೆ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಪ್ರತಿ ವರ್ಷ ಅರ್ಹ ಶಿಕ್ಷಕರಿಂದ ಈ ಪ್ರಶಸ್ತಿಗೆ ಕ್ಷೇತ್ರಶಿಕ್ಷಣಾಧಿಕಾರಿಗಳ ಮೂಲಕ ಅರ್ಜಿಗಳನ್ನು ಪಡೆಯಲಾಗುತ್ತದೆ.


3)ಗುರುಭವನಗಳ ನಿರ್ಮಾಣಕ್ಕೆ ಅನುದಾನ :

ಐತಿಹಾಸಿಕ ಜಿಲ್ಲಾ ಕೇಂದ್ರಗಳಲ್ಲಿ ಗುರುಭವನ ನಿರ್ಮಾಣಕ್ಕೆ ಸೂಕ್ತ ದಾಖಲೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ರಾ.ಶಿ.ಕ.ಪ್ರ.ನವದೆಹಲಿಯ ವತಿಯಿಂದ ರೂ.20 ಲಕ್ಷಗಳವರೆಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುತ್ತದೆ.

  ಸಿಂಧನೂರು ತಾಲೂಕಿನಿಂದ ರಾಜ್ಯ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳಿಗೆ ಅಭಿನಂದನೆಗಳು.